Discover millions of ebooks, audiobooks, and so much more with a free trial

Only $11.99/month after trial. Cancel anytime.

Manjina Bettada Sahasi Chirate
Manjina Bettada Sahasi Chirate
Manjina Bettada Sahasi Chirate
Ebook148 pages41 minutes

Manjina Bettada Sahasi Chirate

Rating: 0 out of 5 stars

()

Read preview

About this ebook

ದೇಶ ಕಾಯುವುದು ಅತ್ಯಂತ ಹೆಮ್ಮೆಯ ಮತ್ತು ಜೀವಪಣಕ್ಕಿಟ್ಟು ಹೋರಾಡುವ ಕಾಯಕ.‌ ಇಂದು ಲೇಹ್-ಲಡಾಕ್ ಭಾರತದಲ್ಲೇ ಉಳಿದುಕೊಂಡಿದ್ದರೆ ಅದಕ್ಕೆ ಕಾರಣನಾದ ಲಡಾಕಿ ಯುವಕ ಚೆವಾಂಗ್ ರಿಂಚೆನ್ ನ್ನು ಮರೆಯುವ ಹಾಗಿಲ್ಲ. ಅಲ್ಲಿನ ವಿಪರೀತ ಮಂಜು ಸುರಿಯುವ ಪ್ರಕೃತಿಯ ಪರಿಸ್ಥಿತಿಯಲ್ಲಿ , ಕೇವಲ ಹದಿನೈದೇ ದಿನದಲ್ಲಿ ತರಬೇತಿ ಪಡೆದು, ತನ್ನದೇ ತಂಡ ಕಟ್ಟಿಕೊಂಡು ಹಲವು ಬಾರಿ ದೈಹಿಕ ಸಾಮರ್ಥ್ಯದಿಂದಲೇ, ಪಾಕೀಸ್ಥಾನವನ್ನು ಬಗ್ಗು ಬಡಿದ ಮುಗ್ಧ ಮನಸ್ಸಿನ ಸಾಹಸೀ ಯುವಕನ ಯಶೋಗಾಥೆಯೇ ಈ ಪುಸ್ತಕದ ತಿರುಳು. ಚಕ್ರವರ್ತಿ ಸೂಲಿಬೆಲೆ ಅವರ ಕಂಚಿನ ಕಂಠದಲ್ಲಿ‌ ಅತ್ಯಂತ ಅಮೋಘವಾಗಿ ಆಡಿಯೋ ಪುಸ್ತಕ ಮೂಡಿಬಂದಿದೆ.
LanguageKannada
Release dateApr 2, 2021
ISBN6580237506186
Manjina Bettada Sahasi Chirate

Related to Manjina Bettada Sahasi Chirate

Related ebooks

Related categories

Reviews for Manjina Bettada Sahasi Chirate

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Manjina Bettada Sahasi Chirate - Chakravarti Sulibele

    http://www.pustaka.co.in

    ಮಂಜಿನ ಬೆಟ್ಟದ ಸಾಹಸಿ ಚಿರತೆ

    Manjina Bettada Sahasi Chirate

    Author:

    ಚಕ್ರವರ್ತಿ ಸೂಲಿಬೆಲೆ

    Chakravarti Sulibele

    For more books

    http://www.pustaka.co.in/home/author/chakravarti-sulibele

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    1. ‘ನಾನು, ನಾನು ಗಡಿ ಕಾಯುತ್ತೇನೆ’

    2. ಪ್ರತಿರೋಧವೇ ಇಲ್ಲದ ಕದನ!

    3. ಗುಂಡಿಗೆ ಎದೆಕೊಡಲು ಗುಂಡಿಗೆ ಬಲವಾಗಿರಬೇಕು!

    4. ತಾಕತ್ತು ತೋರಿಸಿಯೇ ಸೈನಿಕನಾದ

    5. ಸ್ವಾಭಿಮಾನದ ತರುಣ ‘ಮಹಾವೀರ’ನಾದ

    6. ನೆಹರೂ ತಪ್ಪಿಗೆ ನೂರಾರು ಬಲಿ!

    7. ಶತ್ರುಗಳ ಹೊಕ್ಕುಳಲ್ಲೂ ನಡುಕ!

    8. ಸದಾ ಸನ್ನದ್ಧ; ಬೇಕಿದ್ದರೆ ನಡೆಯಲಿ ಯುದ್ಧ

    9. ಪಾಕಿಸ್ತಾನಕ್ಕೆ ಕಪಾಳಮೋಕ್ಷ!

    10. ಗೆಲ್ಲುವುದಷ್ಟೇ ಅಲ್ಲ; ಮರುನಿರ್ಮಾಣವೂ ಆಗಬೇಕು

    11. ಕಾರ್ಮೋಡಕ್ಕೂ ಬೆಳ್ಳಿಗೆರೆ ಇದೆ

    1. ‘ನಾನು, ನಾನು ಗಡಿ ಕಾಯುತ್ತೇನೆ’

    1948 ರ ಮಾರ್ಚ್ 13. ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದ್ ತನ್ನದೊಂದು ಪುಟ್ಟ ತುಕಡಿಯೊಂದಿಗೆ ಲದಾಖ್‍ಗೆ ಬಂದಿಳಿದರು. ಜಮ್ಮು-ಕಾಶ್ಮೀರ ರಾಜ್ಯ ಭಾರತಕ್ಕೆ ಸೇರುವುದಾಗಿ ರಾಜಾ ಹರಿಸಿಂಗರು ಹೇಳಿದ ನಂತರ ಭಾರತೀಯ ಸೇನೆಯ ಪದಾರ್ಪಣೆ ಆಗಿದ್ದು ಆಗಲೇ. ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದ್ ಬ್ರಿಟೀಷ್ ಯುನಿಯನ್ ಜ್ಯಾಕ್ ಧ್ವಜವನ್ನು ಕೆಳಗಿಳಿಸಿ ತಿರಂಗಾ ಮೇಲೇರಿಸಿದರು. ಬ್ರಿಟೀಷ್ ರೆಸಿಡೆನ್ಸಿ ಮಹಲು ಕರ್ಜೋ ಪ್ಯಾಲೆಸ್‍ನ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿಯಾಗಿತ್ತು. ಬೌದ್ಧ ಭಿಕ್ಷುಗಳು ಪ್ರಾರ್ಥನೆ ನೆರವೇರಿಸಿದರು ಮತ್ತು ಧಾರ್ಮಿಕ ವಾದ್ಯಗಳನ್ನು ನುಡಿಸಿದರು. ರಾಷ್ಟ್ರಗೀತೆಯೂ ಮೊಳಗಿದ ಮೇಲೆ ‘ಕೀ ಕೀ ಸೇ ಸೇ ಲಾಗ್ಯಾಲೋ’, ‘ಮಹಾತ್ಮಾ ಗಾಂಧಿಜಿಗೆ ಜಯವಾಗಲಿ’ ಮತ್ತು ‘ಹಿಂದೂಸ್ತಾನ್ ಜಿóದಾಬಾದ್’ ಘೋಷಣೆಗಳು ಮುಗಿಲು ಮುಟ್ಟುವಂತೆ ಮೊಳಗಿದವು. ಸೈನಿಕರ ಪಥ ಸಂಚಲನ, ಸ್ಥಳೀಯ ವಾದ್ಯಗೋಷ್ಠಿ ಮೈನವಿರೇಳಿಸುವಂತಿತ್ತು. ಈಗ ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದರ ಮಾತಿನ ಹೊತ್ತು.

    ‘ನಾವು ನಿಮ್ಮ ಪೂರ್ವಿಕರ ಅಸ್ಥಿ-ಅವಶೇಷಗಳನ್ನು, ಬೌದ್ಧ ಗೋಂಪಾಗಳನ್ನು ರಕ್ಷಿಸಲೆಂದೇ ಬಂದಿದ್ದೇವೆ. ಲೇಹ್‍ನಲ್ಲಿ ವಾಯುನೆಲೆಯ ನಿರ್ಮಾಣಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ. ಒಮ್ಮೆ ಅದು ಪೂರ್ಣವಾದರೆ ಸೈನಿಕರೂ ಮತ್ತು ಸಾಮಗ್ರಿಗಳು ಬರಲಾರಂಭಿಸುತ್ತವೆ. ಆನಂತರ ಯಾವ ಅಡೆತಡೆಯೂ ಇರಲಾರದು’ ಎಂದು ಸ್ಥಳೀಯರ ಆತ್ಮ ವಿಶ್ವಾಸವನ್ನು ವೃದ್ಧಿಸುವ ಪ್ರಯತ್ನ ಮಾಡುತ್ತಿದ್ದರು.

    ಲದಾಖಿಗಳದು ಮುಗ್ಧ ಸ್ವಭಾವ. ಶುದ್ಧ ಹೃದಯ ಅವರದು. ನೆರೆದಿದ್ದವರೆಲ್ಲ ಪಿಳಿ-ಪಿಳಿ ಕಣ್ಣು ಬಿಟ್ಟುಕೊಂಡು ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದ್‍ರನ್ನು ನೋಡುತ್ತ ನಿಂತಿದ್ದರು. ಸೈನ್ಯದ ಮುಖ್ಯಸ್ಥರೊಬ್ಬರ ಮಾತುಗಳು ಅವರಿಗೆ ಖುಷಿ ಕೊಟ್ಟರೂ ಹಿಂಸಾ ಮಾರ್ಗದಲ್ಲಿರುವ ಸೈನಿಕರ ಕುರಿತಂತೆ ಅವರಿಗೆ ಅಷ್ಟಕ್ಕಷ್ಟೇ. ಇದನ್ನು ಗುರುತಿಸಿಯೇ ಅವರನ್ನು ಪ್ರೀತಿಯ ಮಾತುಗಳಿಂದ ಗೆಲ್ಲಲೆತ್ನಿಸಿದ್ದರು ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದ್. ಜನರ ನಡುವೆ ವಿಶ್ವಾಸದ ಗೆರೆಗಳನ್ನು ಗಮನಿಸಿದ ಅವರು ಮಾತಿನ ನಡುವೆ ‘ಲದಾಖಿನ ರಕ್ಷಣೆಗೆ, ದೇಶದ ಸಾರ್ವಭೌಮತೆಯನ್ನು ಕಾಪಾಡಲು ಸ್ವಯಂಸೇವಕರಾಗಿ ಸೈನ್ಯಕ್ಕೆ ಸೇರಲು ಮುಂದೆ ಬರಬೇಕು’ ಎಂದರು. ಜನ ಕೇಳಿಯೂ ಕೇಳದವರಂತೆ ನಿಂತಿದ್ದರು. ಕರ್ನಲ್ ಸಾಹೇಬರು ಬಿಡಲಿಲ್ಲ. ‘ಯಾರ್ಯಾರು ಸೇನೆಗೆ ಸೇರಬಲ್ಲಿರೋ ಕೈ ಎತ್ತಿ’ ಎಂದು ಪಂಥಾಹ್ವಾನ ನೀಡಿದ್ದರು. ಲದ್ದಾಖಿಗಳಿಗೆ ಇವೆಲ್ಲ ಬಲು ಹೊಸತು. ಒಬ್ಬರ ಮುಖ ಮತ್ತೊಬ್ಬರು ನೋಡುತ್ತ ನಿಂತರು. ಅಷ್ಟರಲ್ಲಿ 17 ವರ್ಷದ ಕುಡಿಮೀಸೆಯ ತರುಣನೊಬ್ಬ ಕೈ ಎತ್ತಿ, ‘ನಾನು, ನಾನು ಗಡಿಕಾಯಲು ಸ್ವಯಂಸೇವಕನಾಗಿ ಬರುತ್ತೇನೆ’ ಎಂದ. ಎಲ್ಲರೂ ಒಮ್ಮೆಗೇ ದನಿ ಬಂದವನತ್ತ ತಿರುಗಿದರು. ಕದನದ ಕುತೂಹಲ ಅವನ ಕಂಗಳಲ್ಲಿ ಮಿಂಚುತ್ತಿತ್ತು. ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದ್ ಆ ಹುಡುಗನನ್ನು ದಿಟ್ಟಿಸಿ ನೋಡಿ ಹೆಸರೇನು ಎಂದರು. ಹುಡುಗ ಜಬರ್ದಸ್ತಿನಿಂದಲೇ ಉತ್ತರಿಸಿದ ‘ಚೆವಾಂಗ್ ರಿಂಚೆನ್’! ಅಕ್ಕಪಕ್ಕದವರಿಗೆ ಒಮ್ಮೆ ಕರೆಂಟು ಪಾಸಾದಂತಾಯಿತು.

    ಅವನ ಹೆಸರಿನಲ್ಲಿಯೇ ಒಂದು ಜೀವಂತಿಕೆ ಇದೆ. ಲದಾಖಿ ಭಾಷೆಯಲ್ಲಿ ‘ಚೆವಾಂಗ್ ರಿಂಚೆನ್’ ಅಂದರೆ ಜೀವಂತಿಕೆಯಿಂದ ಕೂಡಿದವ ಅಂತಲೇ ಅರ್ಥ. ‘ಹೀರೋ’ ಅಂತಾನೂ ಅರ್ಥವಂತೆ. ಅವನು ಹುಟ್ಟಿದಾಗ ಮನೆಯವರು ಹೆಸರೇ ಇಟ್ಟಿರಲಿಲ್ಲ. ಜನಗಣತಿಯ ಹೊತ್ತಲ್ಲಿ ಮನೆಗೆ ಬಂದ ಲೆಕ್ಕಿಗರು ಈ ಮುದ್ದು ಹುಡುಗನಿಗೆ ತಾವೇ ನಾಮಕರಣ ಮಾಡಿ ಈ ಹೆಸರನ್ನಿಟ್ಟು ಅಧಿಕೃತವಾಗಿ ದಾಖಲಿಸಿಯೂಬಿಟ್ಟರು. ಮುಂದೆ ಅಪ್ಪ-ಅಮ್ಮ ಇವನನ್ನು ಲಾಮಾ ಪದ್ಮದ ಬಳಿಗೊಯ್ದು ಹೆಸರಿಡುವಂತೆ ಕೇಳಿಕೊಂಡಾಗ ಒಮ್ಮೆ ಕಣ್ಮುಚ್ಚಿ ತೆರೆದ ಲಾಮಾ ‘ಚೆವಾಂಗ್ ರಿಂಚೆನ್’ ಅಂದರು. ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಸೇರಿ ಹೋದ ಹೆಸರೇ ಧಾರ್ಮಿಕ ಮುಖಂಡರ ಬಾಯಿಂದಲೂ ತೇಲಿಬಂದಾಗ ಮನೆಯವರ ಆನಂದಕ್ಕೆ ಪಾರವುಂಟೇ? ಬುದ್ಧ ಈತನ ಭವಿಷ್ಯ ಅಂದೇ ನಿರ್ಧರಿಸಿಯಾಗಿತ್ತು. ಚೆವಾಂಗ್ ರಿಂಚೆನ್ ಅಸಾಧಾರಣವಾದುದನ್ನು ಸಾಧಿಸಲೆಂದೇ ಬಂದಿದ್ದ!

    ರಿಂಚೆನ್ ಕದನದ, ಹೋರಾಟದ ಕನಸು ಕಾಣದ ದಿನವೇ ಇಲ್ಲ. ಅದಕ್ಕೆ ಕಾರಣವೂ ಇದೆ. ಅವರ ಮನೆಗೆ ‘ಸ್ತಾಕ್ರ’ ಎಂಬ ಹೆಸರಿತ್ತು. ಪುಟ್ಟ ಹುಡುಗ ಅಮ್ಮನ ಬಳಿ ಒಮ್ಮೆ ಕೇಳಿದನಂತೆ ‘ಹಾಗೆಂದರೇನು’ ಅಂತ. ಅಮ್ಮ ಕಣ್ಣಗಲಿಸಿ ‘ಹುಲಿ’ ಅಂದಳು. ಮಗನನ್ನು ಕಂಕುಳಲ್ಲಿ ಕೂರಿಸಿಕೊಂಡು ‘ಬಹಳ ಹಿಂದೆ ಲದಾಖಿನ ಗ್ಯಾಲೊ(ರಾಜ) ತುರ್ಕರ ಆಕ್ರಮಣ ತಡೆಯಲು ಕಾದಾಟಕ್ಕಿಳಿದ. ಆಗ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ. ಗೆಲ್ಲಿಸಿಕೊಟ್ಟ ನಿನ್ನ ಪೂರ್ವಜರಿಗೆ ಆತ ಕೊಟ್ಟ ಗೌರವದ ಬಿರುದು ಅದು’ ಎಂದಳು. ಪುಟ್ಟ ರಿಂಚೆನ್ ಅಮ್ಮನ ಸೊಂಟದ ಮೇಲಿಂದ ಕೆಳಗೆ ಜಿಗಿದು ಕೈಗಳನ್ನೇ ಕತ್ತಿ ಮಾಡಿ ಅತ್ತಿಂದಿತ್ತ ಆಡಿಸುತ್ತ ತುರ್ಕಿಸ್ತಾನದ ಸೈನಿಕರೊಂದಿಗೆ ಕಾದಾಡುವಂತೆ ನಟಿಸುತ್ತಾ ‘ಅಮ್ಮ ದೊಡ್ಡವನಾದ ಮೇಲೆ ನಾನೂ ಶತ್ರು ಸೈನಿಕರನ್ನು ಕೊಲ್ಲುತ್ತೇನೆ. ನೀನು ಆಗ ನನ್ನನ್ನು ಸ್ತಾಕ್ರೆ ಎನ್ನುವಿಯಾ?’ ಎಂದ. ತಾಯಿ ಮಗುವಿಗೆ ಮುತ್ತಿಟ್ಟು ಉದ್ದನೆಯ ಗ್ಲಾಸಿನಲ್ಲಿ ಹಾಲುಕೊಟ್ಟು ‘ಮೊದಲು ಬಲಶಾಲಿಯಾಗು. ಧೈರ್ಯವಂತನಾಗು. ಆಗ ನೀನೇ ಹುಲಿಯಾಗುವೆ. ಬುದ್ಧ ನಿನ್ನ ಆಶೀರ್ವದಿಸುತ್ತಾನೆ’ ಎಂದಿದ್ದಳು. ಅಮ್ಮ ಅಂದು ಕುಡಿಸಿದ ಹಾಲಿನ ಶಕ್ತಿ ಈಗ ಲೆಫ್ಟಿನೆಂಟ್ ಕರ್ನಲ್ ಪ್ರೀತಿಚಂದರ ಮುಂದೆ ವ್ಯಕ್ತಗೊಂಡಿತ್ತು.

    ಚೆವಾಂಗ್ ರಿಂಚೆನ್ 1931ರ ನವೆಂಬರ್ 11 ರಂದು ಕುಂಜಾಂಗ್ ಹಾರ್ಜೆ, ಜಾಮ್ಯಾಂಗ್ ಡೋಲ್ಮಾರ ಹಿರಿ ಮಗನಾಗಿ ಹುಟ್ಟಿದವ. ಕಾರಕೋರಮ್ ಶ್ರೇಣಿಯ ಸಿಯಾಚಿನ್ ಬೆಟ್ಟಗಳ ತಪ್ಪಲಿನಲ್ಲಿರುವ ನುಬ್ರಾ ಕಣಿವೆಯ ಸುಮರ್ ಎಂಬ ಹಳ್ಳಿಯಲ್ಲಿ ಅವನ ಜನನವಾಗಿತ್ತು. ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿ. ತಂದೆ

    Enjoying the preview?
    Page 1 of 1